ಕಿರಣ್ ಸೇಗಲ್ ಒಬ್ಬ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ. ಇವರು ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರವಾದ, ಒಡಿಸ್ಸಿಯಲ್ಲಿ ತಮ್ಮ ಪ್ರಾವೀಣ್ಯತೆಗೆ ಹೆಸರುವಾಸಿಯಾಗಿದ್ದಾರೆ. ಅವರು ೧೯೯೮ ರ ಪದ್ಮಶ್ರೀ ಪ್ರಶಸ್ತಿ ವಿಜೇತ ನಟ ಜೋಹ್ರಾ ಸೇಗಲ್ ಅವರ ಮೇಲೆ ಮತ್ತು ಅವರ ತಾಯಿಯ ಮೇಲೆ ಜೋಹ್ರಾ ಸೇಗಲ್ - ಫ್ಯಾಟಿ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇವರು ಎಂ.ಕೆ.ಸರೋಜಾ ಅವರ ಶಿಷ್ಯೆ. ಸೇಗಲ್ ಪ್ರಪಂಚದಾದ್ಯಂತ ವಿವಿಧ ಸ್ಥಳಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ. ೨೦೦೨ ರಲ್ಲಿ ಇವರಿಗೆ ಭಾರತ ಸರ್ಕಾರವು ಪದ್ಮಶ್ರೀಯ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. == ಸಹ ನೋಡಿ == ಒಡಿಸ್ಸಿ ಜೋಹ್ರಾ ಸೇಗಲ್ == ಉಲ್ಲೇಖಗಳು ==